Wednesday, September 4, 2024

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

 ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು ಶಾಂತಿಯಾ ಉಳಿಸು ಶಾಂತಿಯಾ ಉಳಿಸು ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ... ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ನಮ್ಮ ಕೋರಿಕೆ ಆಲಿಸಮ್ಮ ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ... ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು ಆಸೆ ಪೂರೈಸೂ ಆಸೆ ಪೂರೈಸೂ ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

No comments:

Featured Post

Quest

Small life, wishing so much, Unware of our destination Moving all around in search of unknown peace.. Peace, which in turn brings smile ...