Showing posts with label kannada songs. Show all posts
Showing posts with label kannada songs. Show all posts

Friday, February 6, 2026

Kaanada Kadalige Hambaliside Mana / ಕಾಣದ ಕಡಲಿಗೆ ಹಂಬಲಿಸಿದೆ ಮನ - song lyrics

ಕಾಣದ ಕಡಲಿಗೆ ಹಂಬಲಿಸಿದೆ ಮನ, ಮನ…

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣದ ಕಡಲಿಗೆ ಹಂಬಲಿಸಿದೆ ಮನ

ಕಾಣಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ

ಕಾಣಬಲ್ಲೆನೆ ಒಂದು ದಿನ

ಕಡಲನು ಕೂಡಬಲ್ಲೆನೆ ಒಂದು ದಿನ 

ಕಾಣದ ಕಡಲಿಗೆ ಹಂಬಲಿಸಿದೆ ಮನ ||

 

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ಕಾಣದ ಕಡಲಿನ ಮೊರೆತದ ಜೋಗುಳ 

ಒಳಗಿವಿಗಿಂದು ಕೇಳುತಿದೆ 

ನನ್ನ ಕಲ್ಪನೆಯು ತನ್ನ ಕಡಲನೆ 

ಚಿತ್ರಿಸಿ ಚಿಂತಿಸಿ ಸುಯ್ಯುತಿದೆ 

ಎಲ್ಲಿರುವುದೋ ಅದು ಎಂತಿರುವುದೋ ಅದು 

ನೋಡಬಲ್ಲೆನೆ ಒಂದು ದಿನ 

ಕಡಲನು ಕೂಡಬಲ್ಲೆನೆ ಒಂದು ದಿನ ॥೧॥

ಕಾಣದ ಕಡಲಿಗೆ ಹಂಬಲಿಸಿದೆ ಮನ.

 

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸಾವಿರ ಹೊಳೆಗಳು ತುಂಬಿ ಹರಿದರೂ 

ಒಂದೇ ಸಮನಾಗಿಹುದಂತೆ

ಸುನೀಲ ವಿಸ್ತರ ತರಂಗ ಶೋಭಿತ 

ಗಂಭೀರಾಂಬುಧಿ ತಾನಂತೆ 

ಮುನ್ನೀರಂತೆ, ಅಪಾರವಂತೆ,

ಕಾಣಬಲ್ಲೆನೆ ಒಂದು ದಿನ 

ಅದರೊಳು ಕರಗಲಾರೆನೆ ಒಂದು ದಿನ  ॥೨॥

ಕಾಣದ ಕಡಲಿಗೆ ಹಂಬಲಿಸಿದೆ ಮನ.

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು 

ಎಂದಿಗಾದರು, ಎಂದಿಗಾದರು, ಎಂದಿಗಾದರೂ 

ಕಾಣದ ಕಡಲನು ಸೇರಬಲ್ಲೆನೇನು

ಜಟಿಲ ಕಾನನದ ಕುಟಿಲ ಪಥಗಳಲಿ 

ಹರಿವ ತೊರೆಯು ನಾನು

ಎಂದಿಗಾದರು ಕಾಣದ ಕಡಲನು ಸೇರಬಲ್ಲೆನೇನು

ಸೇರಬಹುದೇ ನಾನು, ಕಡಲ ನೀಲಿಯೊಳು ಕರಗಬಹುದೆ ನಾನು 

ಕರಗಬಹುದೆ ನಾನು, ಕರಗಬಹುದೆ ನಾನು  ॥೩॥

Friday, October 24, 2025

ಐ ಗಿರಿ ನಂದಿನಿ ನಂದಿತಮೇದಿನಿ

 

ಐ ಗಿರಿ ನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನೂತೇ,
ಗಿರಿವರವಿಂಧ್ಯ ಶಿರೋಽಧಿನಿವಾಸಿನಿ ವಿಶ್ಣುವಿಲಾಸಿನಿ ಜೀಷ್ಣುನೂತೇ।
ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕೃತೇ ನಮೋ ನಮಃ॥

ಜಯ ಜಯ ಹೇ ಮಹಿಷಾಸುರಮರ್ಧಿನಿ ರಾಮ್ಯಕಪಾರಿಣಿ ಶುಂಭನಿಶುಂಬಹನಿನಿ
ಜಯ ಜಯ ಹೇ ಮಹಿಷಾಸುರಮರ್ಧಿನಿ ರಾಮ್ಯಕಪಾರಿಣಿ ಶುಂಭನಿಶುಂಬಹನಿನಿ॥

ಧೂಮ್ರವಿಲೋಚನ ಧೂಮ್ರಶಿರೋಽಧಿನಿ, ನಿಶ್ಶಿತಧೀನ ವಿಲಾಸಿನಿ,
ಶಂಕರದೂತಕರಾಯಿತ ದೇವಿ, ನಂದಿಸುತಪ್ರಮಥಾಧಿಪಶ್ರೀ।

ಐ ಗಿರಿ ನಂದಿನಿ ನಂದಿತಮೇದಿನಿ ವಿಶ್ವ ವಿನೋದಿನಿ ನಂದನೂತೇ,
ಗಿರಿವರವಿಂಧ್ಯ ಶಿರೋಽಧಿನಿವಾಸಿನಿ ವಿಶ್ಣುವಿಲಾಸಿನಿ ಜೀಷ್ಣುನೂತೇ।
ಭಗವತಿ ಹೇ ಶಿತಿಕಂಠಕುಟುಂಬಿನಿ ಭೂರಿಕೃತೇ ನಮೋ ನಮಃ॥

Wednesday, September 4, 2024

ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

 ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ

ಪ್ರೇಮದಿಂದಲಿ ಸಲಹು ಮಾತೆ ನೀಡು ಸನ್ಮತಿ ಸೌಖ್ಯದಾತೆ ಅಂಧಕಾರವ ಓಡಿಸು ಜ್ಞಾನ ಜ್ಯೋತಿಯ ಬೆಳಗಿಸು ಹೃದಯ ಮಂದಿರದಲ್ಲಿ ನೆಲೆಸು ಚಿಂತೆಯಾ ಅಳಿಸು ಶಾಂತಿಯಾ ಉಳಿಸು ಶಾಂತಿಯಾ ಉಳಿಸು ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ... ನಿನ್ನ ಮಡಿಲಿನ ಮಕ್ಕಳಮ್ಮ ನಿನ್ನ ನಂಬಿದ ಕಂದರಮ್ಮ ನಿನ್ನ ಕರುಣೆಯ ಬೆಳಕಲೆಮ್ಮ ಬಾಳನೂ ಬೆಳಗಮ್ಮ ನಮ್ಮ ಕೋರಿಕೆ ಆಲಿಸಮ್ಮ ನಮ್ಮ ಕೋರಿಕೆ ಆಲಿಸಮ್ಮ ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ... ಒಳ್ಳೆ ಮಾತುಗಳಾಡಿಸು ಒಳ್ಳೆ ಕೆಲಸವ ಮಾಡಿಸು ಒಳ್ಳೆ ದಾರಿಯಲೆಮ್ಮ ನಡೆಸು ವಿದ್ಯೆಯಾ ಕಲಿಸು ಆಸೆ ಪೂರೈಸೂ ಆಸೆ ಪೂರೈಸೂ ತಾಯಿ ಶಾರದೆ ಲೋಕ ಪೂಜಿತೆ ಜ್ಞಾನದಾತೆ ನಮೋಸ್ತುತೆ...

Featured Post

Quest

Small life, wishing so much, Unware of our destination Moving all around in search of unknown peace.. Peace, which in turn brings smile ...